Friday, December 19, 2014

ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ, 
ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ - ೨
ಕರುನಾಡು ಸ್ವರ್ಗದ ಸೀಮೆ, ಕಾವೇರಿ ಹುಟ್ಟಿದ ನಾಡು,
ಕಲ್ಲಲಿ ಕಲೆಯನು ಕಂಡ, ಬೇಲೂರು ಶಿಲ್ಪದ ಬೀಡು
ಬಸವೇಶ್ವರ, ರನ್ನ-ಪಂಪರ ಸವಿ ವಾಣಿಯ ನಾಡು
ಚಾಮುಂಡಿ ರಕ್ಷೆಯು ನಮಗೆ, ಗೊಮಟೆಷ ಕಾವಲು ಇಲ್ಲಿ,
ಶ್ರಿಂಗೇರಿ ಶಾರದೆ ವೀಣೆ, ರಸ ತುಂಗೆ ಆಗಿದೆ ಇಲ್ಲಿ,
ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು
ಏಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ,
ಎನೇನು ಕಷ್ಟವೇ ಇರಲಿ ಸಿರಿಗನ್ನಡ ತಾಯ್ಗೆ ದುಡಿವೆ,
ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ
ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ, 
ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ
ಇದೆ ನಾಡು ಇದೆ ಭಾಷೆ ಎಂದೆಂದೂ ನಮ್ಮದಾಗಿರಲಿ

Yava Mohana Murali Kareyithu


ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು

ಹೂವು ಹಾಸಿಗೆ ಚಂದ್ರ ಚಂದನ
ಬಾಹು ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ
ಕರಣ ಗಣದೀ ರಿಂಗನ

ಸಪ್ತ ಸಾಗರದಾಚೆ ಎಲ್ಲೊ
ಸುಪ್ತ ಸಾಗರ ಕಾದಿದೆ
ಮೊಳೆಯ ದಲೆಗಳ ಮೂಕ ಮರ್ಮರ
ಇಂದು ಇಲ್ಲಿಗೂ ಹಾಯಿತೆ?

ವಿವಶವಾಯಿತು ಪ್ರಾಣ - ಹಾ!!
ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ

ಯಾವ ಮೋಹನ ಮುರಳಿ ಕರೆಯಿತು
ಇದ್ದಕಿದ್ದಲೇ ನಿನ್ನನು
ಯಾವ ಬೃಂದಾವನವು ಚಾಚಿತು
ತನ್ನ ಮಿಂಚಿನ ಕಯ್ಯನು

ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು

Thursday, October 3, 2013


ರತ್ನನ್ ಪರ್ಪಂಚ ಯೇಳ್ಕೊಳ್ಳಾಕ್ ಒಂದ್ ಊರು 
ತಲೇಮೇಗ್ ಒಂದ್ ಸೂರು 
ಮಲಗಾಕೆ ಬೂಮ್ತಾಯಿ ಮಂಚ ; 
ಕೈ ಯಿಡದೋಳ್ ಪುಟ್ನಂಜಿ 
ನೆಗನೆಗತ ಉಪ್ಗಂಜಿ ಕೊಟ್ರಾಯ್ತು ರತ್ನನ್ ಪರ್ಪಂಚ! 
ಅಗಲೆಲ್ಲ ಬೆವರ್ ಅರ್ಸಿ 
ತಂದದ್ರಲ್ಲ್ ಒಸಿ ಮುರ್ಸಿ 
ಸಂಜೇಲಿ ವುಳಿ ಯೆಂಡ ಕೊಂಚ ; 
ಯೀರ‍್ತ ಮೈ ಝುಂ ಅಂದ್ರೆ 
ವಾಸ್ನೆ ಘಂ ಘಂ ಅಂದ್ರೆ ತುಂಭೋಯ್ತು ರತ್ನನ್ ಪರ್ಪಂಚ ! 
ಏನೋ ಕುಸಿಯಾದಾಗ 
ಮತ್ತ್ ಎಚ್ಚಿ ಓದಾಗ 
ಅಂಗೇನೆ ಪರಪಂಚದ್ ಅಂಚ ; 
ದಾಟ್ಕಂಡಿ ಆರಾಡ್ತ
ಕನ್ನಡದಲ್ ಪದವಾಡ್ತ  ಇಗ್ಗೋದು ರತ್ನನ್ ಪರ್ಪಂಚ !    
ದುಕ್ಕಿಲ್ಲ ದಾಲಿಲ್ಲ 
ನಮಗ್ ಅದರಾಗ್ ಪಾಲಿಲ್ಲ 
ನಾವ್ ಕಂಡಿಲ್ಲ್ ಆ ತಂಚ ವಂಚ ; 
ನಮ್ಮಸ್ಟಕ್ ನಾವಾಗಿ 
ಇದ್ದಿದ್ರಲ್ಲ್ ನಾವಾಗಿ ಬಾಳೋದು ರತ್ನನ್ ಪರ್ಪಂಚ ! 
ಬಡತನ ಗಿಡತನ ಏನಿದ್ರೇನ್ ? 
ನಡತೇನ ಚೆಂದಾಗ್ ಇಟ್ಕೊಳ್ಳಾದೆ ಅಚ್ಛ ! 
ಅಂದ್ಕೊಂಡಿ ಸುಕವಾಗಿ 
ಕಸ್ಟಕ್ ನೆಗಮೊಕವಾಗಿ ನೆಗೆಯೋದೆ ರತ್ನನ್ ಪರ್ಪಂಚ !   
 ದೇವ್ರ್ ಏನ್ರ ಕೊಡಲಣ್ಣ 
ಕೊಡದಿದ್ರೆ ಬುಡಲಣ್ಣ ನಾವೆಲ್ಲ ಔನೀಗೆ ಬಚ್ಛ ! 
ಔನ್ ಆಕಿದ್ ತಾಳ್ದಂಗೆ 
ಕಣ್ ಮುಚ್ಕೊಂಡ್ ಯೇಳ್ದಂಗೆ ಕುಣಿಯಾದೆ ರತ್ನನ್ ಪರ್ಪಂಚ!

Sunday, April 4, 2010


ಅವನಲ್ಲಿ ಇವಳಿಲ್ಲಿ ಮಾತಿಲ್ಲಾ ಕಥೆಯಿಲ್ಲಾ ಎದುರೆದುರು ಬಂದಾಗ ಹೆದರೆದರಿ ನಿಂತಾಗಾ
ಅಲ್ಲೆ ಆರಂಭ ಪ್ರೇಮ || ೨
ನೋಡಿ ನೋಡಿ ಪ್ರೇಮವನು ಮಾಡೋದಲ್ಲಾ ಮಾಡುತಲಿ ಹಾಡೋದಲ್ಲಾ ಹಾಡಿನಲಿ ಹೇಳೋದಲ್ಲಾ
ಹೇಳುವುದ ಕೇಳೋದಲ್ಲಾ ಕೇಳುತಲಿ ಕಲಿಯೋದಲ್ಲಾ ಕಲಿತು ನೀ ಮಾಡೋದಲ್ಲಾ
ಮೌನವೇನೆ ಧ್ಯಾನವೇ ಪ್ರೇಮಾಆಆಆ......... ಅವನಲ್ಲಿ ಇವಳಿಲ್ಲಿ .......
ನೀನೆ ಎಲ್ಲಾ ನೀನಿರದೆ ಬಾಳೇ ಇಲ್ಲಾ ಅನ್ನುವುದು ಪ್ರೇಮಾ ಅಲ್ಲಾ
ಮರಗಳನ್ನು ಸುತ್ತೋದಲ್ಲಾ ಕವನಗಳಾ ಗೀಚೋದಲ್ಲಾ ನೆತ್ತರಲ್ಲಿ ಬರೆಯೋದಲ್ಲಾ
ವಿಷವನು ಕುಡಿಯೋದಲ್ಲಾ ಮೌನವೇನೆ ಧ್ಯಾನವೇ ಪ್ರೇಮಾಆಆಆ....... ಅವನಲ್ಲಿ ಇವಳಿಲ್ಲಿ

**ಮಾತು ಮುರಿದ ಮೋಸಗಾತಿ**


ಮಾತು ಮುರಿದೆ ಮಾತಾಡದೆ ಮೋಹಕ ಮೋಸವ ಮಾಡಿದೆ
ಮೂಕ ಮನಸು ಮಂಕಾಗಿದೆ ಮಾರಿಯ ಮೋಜಿದು ಮೀರಿದೆ
ಓ ಜೀವಾ ಓ ಜೀವಾ ಓ ಜೀವಾ ವೋ..ಓ..ಓ
ಸಂಸಾರಕ್ ಹೆಣ್ಣೆ ಕಣ್ಣು ಸಂಹಾರ ಹಾದಿ ಹೆಣ್ಣು ಶೋಕಿಯ ಮೂಲ ಹೆಣ್ಣು
ಶೋಕದ ಮೂಲ ಹೆಣ್ಣು .......|| ೨ ||
ಸಂಧಾನವೋ ಸಂಗ್ರಾಮವೋ ಪ್ರೇಮಾಂತರಂಗವೆಲ್ಲ ಸಂತಾಪವೋ
ಮಾತು ಮುರಿದೆ ಮಾತಾಡದೆ ಮೋಹಕ ಮೋಸವ ಮಾಡಿದೆ
ಮೂಕ ಮನಸು ಮಂಕಾಗಿದೆ ಮಾರಿಯ ಮೋಜಿದು ಮೀರಿದೆ
ಓ ಜೀವಾ ಓ ಜೀವಾ ಓ ಜೀವಾ ವೋ..ಓ..ಓ
ಕಳ್ಳಿ ಹೂ ಪೂಜೆಗಲ್ಲ ಕಾಳಿಂಗ ಸಾಕಲಲ್ಲ
ಏನೇನು ಎಲ್ಲಿರಬೇಕು ತಿಳಿದೇನೆ ಹೋಯಿತೆ.......|| ೨ ||
ಎತ್ತೊಡೆದೆ ಜಿದ್ದಾಗದೆ ಹೂಮನಸಿನಾಸೆಯಲ್ಲ ಹುಚ್ಚು ಹೊಳೆ
ಮಾತು ಮುರಿದೆ ಮಾತಾಡದೆ ಮೋಹಕ ಮೋಸವ ಮಾಡಿದೆ
ಮೂಕ ಮನಸು ಮಂಕಾಗಿದೆ ಮಾರಿಯ ಮೋಜಿದು ಮೀರಿದೆ
ಓ ಜೀವಾ ಓ ಜೀವಾ ಓ ಜೀವಾ ವೋ..ಓ..ಓ